SSP scholarship 2024 : SSP ಸ್ಕಾಲರ್ಷಿಪ್ ಅರ್ಜಿ ಆರಂಭ | ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ!
SSP scholarship 2024 : ನಮಸ್ಕಾರ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ ಎಲ್ಲಾ ಓದುವರಿಗೂ ಇವತ್ತಿನ ಈ ಲೇಖನವೂ ನಿಮಗೆ SSP ಸ್ಕಾಲರ್ಶಿಪ್ ಅರ್ಜಿ ಆರಂಭ ಆಗಿರುವ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿಸಿಕೊಡುತ್ತದೆ. ಕಾಲೇಜು ವಿದ್ಯಾರ್ಥಿಗಳು ತಪ್ಪದೆ ಈ ಮಾಹಿತಿಯನ್ನು ಕೊನೆಯ ತನಕ ನೋಡಲೇಬೇಕು. ಇಲ್ಲಿ ರಾಜ್ಯ ಸರ್ಕಾರದ ಮೂಲಕ ನೀಡಲಾಗುವ ವಿದ್ಯಾರ್ಥಿ ವೇತನದ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ.
ಗೆಳೆಯರೇ ನಮ್ಮೆಲ್ಲರಿಗೂ ಗೊತ್ತಿರುವ ತರ ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಯಾವುದೇ ರಿತಿಯ ಉನ್ನತ ಶಿಕ್ಷಣವನ್ನು ಪಡೆಯಬೇಕಾದರೆ ಸಾಕಷ್ಟು ಹಣ ಖರ್ಚಾಗುತ್ತದೆ ಆದರೆ ಕೆಲವು ಬಡ ಕುಟುಂಬದಲ್ಲಿನ ಶಿಕ್ಷಣದಲ್ಲಿ ಪ್ರತಿಭಾವಂತ ಮಕ್ಕಳಿಗೆ ಹಣದ ಕೊರತೆಯಿಂದಾಗಿ ತಮ್ಮ ಉನ್ನತ ಶಿಕ್ಷಣವನ್ನು ಪೂರ್ತಿಗೊಳಿಸಲು ಅಥವಾ ಮುಂದುವರಿಸಲು ಹಾಗೂ ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ನಮ್ಮ ರಾಜ್ಯ ಸರ್ಕಾರವು ವಿದ್ಯಾರ್ಥಿ ವೇತನವನ್ನು(scholarship) ನೀಡುತ್ತಿದೆ. SSP ಸ್ಕಾಲರ್ಶಿಪ್ನ ಮೂಲಕ ರಾಜ್ಯದಲ್ಲಿರುವ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನದ ರೂಪದಲ್ಲಿ ಹಣದ ಸಹಾಯವನ್ನು ನೀಡಲಾಗುತ್ತದೆ.
ಈ ವರ್ಷದ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ (SSP) ಮೂಲಕ ನೀಡಲಾಗುವ ವಿಧ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಕರೆಯಲಾಗಿದ್ದು, ಇದಕ್ಕೆ ಯಾವ ವಿದ್ಯಾರ್ಥಿಗಳು ಅರ್ಜಿ ಹಾಕಲು ಅವಕಾಶವಿದೆ? ಅರ್ಜಿ ಹಾಕಲು ಬೇಕಾಗುವ ಡಾಕ್ಯುಮೆಂಟ್ಸ್ಗಳೇನು? ಮತ್ತು ಅರ್ಜಿ ಹಾಕಲು ಕೊನೆಯ ದಿನಾಂಕ? ಹಾಗೂ ಈ ವಿದ್ಯಾರ್ಥಿ ವೇತನದ ಮೂಲಕ ವಿದ್ಯಾರ್ಥಿಗಳಿಗೆ ಏನೆಲ್ಲ ಸವಲತ್ತುಗಳನ್ನು ನೀಡಲಾಗುವುದು ಅನ್ನುವ ಕುರಿತು ಈ ಕೆಳಗೆ ಮಾಹಿತಿ ನೀಡಲಾಗಿದೆ.
SSP ಸ್ಕಾಲರ್ಷಿಪ್ ಅರ್ಜಿ ಆರಂಭ (SSP scholarship 2024) :
ನಮ್ಮ ರಾಜ್ಯ ಸರ್ಕಾರ ರಾಜ್ಯದಲ್ಲಿನ ಶಿಕ್ಷಣದಲ್ಲಿದ ಪ್ರತಿಭಾವಂತ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಹಲವಾರು ವಿದ್ಯಾರ್ಥಿ ವೇತನಗಳನ್ನು ಜಾರಿಗೊಳಿಸಿ ಅವರ ಶಿಕ್ಷಣಕ್ಕೆ ಸಹಕರಿಸುತ್ತಿದೆ. ಅದರಲ್ಲಿ ಪ್ರಮುಖವಾದದ್ದು SSP ಸ್ಕಾಲರ್ಷಿಪ್ ಎಂದು ಹೇಳಬಹುದು. ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಅರ್ಹತೆಗೆ ತಕ್ಕಹಾಗೆ ವಿದ್ಯಾರ್ಥಿವೇತನವನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತದೆ. ಆದಕಾರಣ ಪ್ರತಿಯೊಬ್ಬರು SSP ಸ್ಕಾಲರ್ಷಿಪ್ ಯೋಜನೆಗೆ ನೊಂದಣಿ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಿ. ಅರ್ಪಿಸಲು ಬೇಕಾದ ಮಾಹಿತಿ ಕುರಿತು ಕೆಳಗೆ ತಿಳಿದುಕೊಳ್ಳಿ.
SSP ಸ್ಕಾಲರ್ಷಿಪ್ ಅರ್ಹತೆ ಇರುವ ವಿದ್ಯಾರ್ಥಿಗಳು :
SSP ಸ್ಕಾಲರ್ಶಿಪ್ ಗೆ ಈ ಕೆಳಗಿನ ಶೈಕ್ಷಣಿಕ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
- ಪಿಯುಸಿ ವಿದ್ಯಾರ್ಥಿಗಳು
- ಡಿಪ್ಲೋಮಾ ಓದುತ್ತಿರುವವರು
- ಪದವಿ ಓದುತ್ತಿರುವವರು
- ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು
SSP ಸ್ಕಾಲರ್ಷಿಪ್ ಡಾಕುಮೆಂಟ್ಸ್ ಯಾವುವು?
ವಿದ್ಯಾರ್ಥಿಗಳೇ ನೀವು ಮೇಲೆ ನೀಡಿದ ತರಗತಿಗಳಲ್ಲಿ ಓದುತ್ತಿದ್ದರೆ ಈ ಕೆಳಗಿನ ದಾಖಲೆಗಳನ್ನು ತೆಗೆದುಕೊಂಡು SSP ಸ್ಕಾಲರ್ ಶಿಪ್ ಗೆ ಅರ್ಜಿ ಹಾಕಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಿ.
- ಚಾಲ್ತಿಯಲ್ಲಿರುವ ಫೋನ್ ನಂಬರ್
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್
- 10ನೇ ತರಗತಿ ಅಂಕಪಟ್ಟಿ
- ಪ್ರಸ್ತುತ ಓದುತ್ತಿರುವ ತರಗತಿಯ ರಿಜಿಸ್ಟರ್ ನಂಬರ್
- ವಸತಿ ನಿಲಯದ ವಿವರ
SSP ಸ್ಕಾಲರ್ಶಿಪ್ ಅರ್ಜಿ ಸಲ್ಲಿಸುವುದು ಹೇಗೆ?
ವಿದ್ಯಾರ್ಥಿಗಳೇ ನೀವು ಮೇಲೆ ನೀಡಿರುವ ಅರ್ಹತೆಗಳು ಮತ್ತು ದಾಖಲೆಗಳನ್ನು ಹೊಂದಿದ್ದರೆ, ಈ ಒಂದು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. SSP ಪೋರ್ಟಲ್ ಅಲ್ಲಿ ನೊಂದಣಿ ಮಾಡಿಕೊಳ್ಳಲು ಬೇಕಾಗಿರುವ ಡೈರೆಕ್ಟ್ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ. ಅದರ ಮೇಲೆ ಒತ್ತಿ ಕೇಳುವ ದಾಖಲೆಗಳನ್ನು ಭರ್ತಿ ಮಾಡಿ ನೋಂದಣಿ ಮಾಡಿಕೊಂಡು SSP ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸಿ.
SSP ಸ್ಕಾಲರ್ಶಿಪ್ ಗೆ ಅರ್ಜಿ ಹಾಕಲು ಇಲ್ಲಿ ಒತ್ತಿ.
SSP ಸ್ಕಾಲರ್ಶಿಪ್ ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ?
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿಧ್ಯಾರ್ಥಿ ವೇತನ ಕೊನೆಯ ದಿನಾಂಕ – 20/12/2024
ರಾಜ್ಯ ಬ್ರಹ್ಮಣ ಅಭಿವೃದ್ಧಿ ಮಂಡಳಿಯ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕೊನೆಯ ದಿನಾಂಕ – 31/12/2024
ಕಾರ್ಮಿಕ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕೊನೆಯ ದಿನಾಂಕ – 31/12/2024
ಅಲ್ಪ ಸಂಖ್ಯಾತರ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕೊನೆಯ ದಿನಾಂಕ – 31/12/2024
ಕೃಷಿ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕೊನೆಯ ದಿನಾಂಕ – 31/12/2024
ಸ್ನೇಹಿತರೆ SSP ಸ್ಕಾಲರ್ಶಿಪ್ ಗೆ ಹೇಗೆ ಅರ್ಜಿ ಹಾಕುವುದು ಮತ್ತು ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ ಎನ್ನುವ ಪ್ರತಿಯೊಂದು ಮಾಹಿತಿಯನ್ನು ನಿಮಗೆ ಈ ಲೇಖನ ತಿಳಿಸಿದೆ ಒಂದು ಭಾವಿಸುತ್ತೇನೆ ಇದೇ ರೀತಿಯ ಮಾಹಿತಿಗಾಗಿ ಮತ್ತೆ ಮತ್ತೆ ಭೇಟಿ ನೀಡಿ.